ಇಂಡಿಯನ್ ಅಸೋಸಿಯೇಷನ್ ಆಫ್ ಇಂಡಸ್ಟ್ರಿಯಲ್ ಎಡಿಟರ್ಸ್-
ಈ ಸಂಘ 1956ರಲ್ಲಿ ಬೊಂಬಾಯಿಯಲ್ಲಿ ಸ್ಥಾಪಿತವಾಯಿತು. ಕೈಗಾರಿಕಾ ಮಾಲೀಕರುಗಳಲ್ಲಿ ಪ್ರಚಾರತಂತ್ರದ ಪ್ರಾಮುಖ್ಯವನ್ನು ತಿಳಿಸಿ ಕೈಗಾರಿಕಾ ಪತ್ರಿಕೋದ್ಯಮ e್ಞÁನವನ್ನು ಅಭಿವೃದ್ಧಿ ಪಡಿಸುವುದು. ಕೈಗಾರಿಕಾ ಸಂಪಾದಕರುಗಳ ಸ್ಥಾನಮಾನಗಳನ್ನು ಹೆಚ್ಚಿಸುವುದು ಮತ್ತು ಕಂಪನಿ ಪ್ರಕಟಣೆಗಳ ಅಭಿವೃದ್ಧಿಗಾಗಿ ದುಡಿಯುವುದು-ಇವೇ ಈ ಸಂಘದ ಮುಖ್ಯ ಉದ್ದೇಶಗಳು. ಸದಸ್ಯರ ಅನುಕೂಲಕ್ಕಾಗಿ ಆಗಾಗ್ಗೆ ಸಭೆಗಳನ್ನು ನಡೆಸುವುದಲ್ಲದೆ ಕೈಗಾರಿಕಾ ಪತ್ರಿಕೋದ್ಯಮದ ಸಮಸ್ಯೆಗಳನ್ನು ಚರ್ಚಿಸಲು ವರ್ಷಕ್ಕೊಂದು ಸಲ ವಿಚಾರಗೋಷ್ಠಿಯನ್ನು ಈ ಸಂಘ ಏರ್ಪಡಿಸುತ್ತವೆ. ಈ ವಿಚಾರಗೋಷ್ಠಿಯಲ್ಲಿ ಸಂಘದ ಸದಸ್ಯರಲ್ಲದೆ, ಪತ್ರಿಕೋದ್ಯಮ ವೃತ್ತಿಯಲ್ಲಿ ಆಸಕ್ತಿಯುಳ್ಳವರೆಲ್ಲರೂ ಭಾಗವಹಿಸಲು ಅವಕಾಶ ನೀಡಲಾಗುತ್ತದೆ. ಅಂತರರಾಷ್ಟ್ರೀಯ ಕೈಗಾರಿಕಾಸಂಪಾದಕರುಗಳ ಸಮ್ಮೇಳನದ ಸದಸ್ಯತ್ವವನ್ನು ಪಡೆದಿರುವ ಈ ಸಂಘದಲ್ಲಿ ನೂರಕ್ಕೂ ಹೆಚ್ಚು ಸದಸ್ಯರಿದ್ದಾರೆ. ಕೈಗಾರಿಕಾ ವಿಷಯಗಳನ್ನೇ ಪ್ರಧಾನವಾಗಿಟ್ಟುಕೊಂಡು ಪತ್ರಿಕೋದ್ಯಮದಲ್ಲಿ ಬಾಂಬೆ ಕಾಲೇಜ್ ಆಫ್ ಜರ್ನಲಿಸಂ ಸಂಸ್ಥೆಯ ಮೂಲಕ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಈ ಸಂಘ ತನ್ನ ಸಂಪೂರ್ಣ ನೆರವನ್ನು ನೀಡುತ್ತಿದೆ.				
 (ಎನ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ